ಕರಾವಳಿ ಪ್ರವಾಸದುದ್ದಕ್ಕೂ ಅಮಿತ್ ಶಾ ಕರ್ನಾಟಕ ರಾಜ್ಯ ಸರಕಾರದ ಮೇಲಿನ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಉಡುಪಿಯ ಮಲ್ಪೆಯಲ್ಲಿ ಸೋಮವಾರ ರಾತ್ರಿ ಆಯೋಜಿಸಲಾಗಿದ್ದ ಬೃಹತ್ ಮೀನುಗಾರರ ಸಮಾವೇಶದಲ್ಲಿಯೂ ಅವರು ರಾಜ್ಯ ಸರಕಾರದ ವಿರುದ್ದ ಕೆಂಡಕಾರಿದ್ದಾರೆ. ಕರ್ನಾಟಕದಲ್ಲಿ ಸರ್ಕಾರ ಬದಲಾಗುವ ಲಕ್ಷಣ ಗೋಚರಿಸುತ್ತಿದೆ. ಮುಂಬರುವ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದರು.